December 23, 2024
IMG-20210921-WA0001

ಕೊಪ್ಪಳದ ಸಾಹಸಿ ಉದ್ಯಮಿ: ಭೂಮರೆಡ್ಡಿ !

ಕೊಪ್ಪಳ-ಗದಗ ಹುಬ್ಬಳ್ಳಿ ಕಡೆ ಹೋದಾಗಲೆಲ್ಲ ಕಾಲೇಜು, ಆಯಿಲ್ ಮಿಲ್, ಜಿನ್ನಿಂಗ್ ಮಿಲ್ ಗಳನ್ನು ನೋಡಿ ಯಾರು ಈ ಭೂಮರಡ್ಡಿ ಎಂದು ತಲೆಯಲ್ಲಿ ಒಂದು ಪ್ರಶ್ನೆ ಹಲವರಲ್ಲಿ ಸಹಜವಾಗಿ ಮೂಡುತಿತ್ತು.

ನಮ್ಮಹೆಮ್ಮೆಯ ಕೊಪ್ಪಳ ಜಿಲ್ಲೆಯ ಕೂಕನೂರ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಆಯಿಲ್’ಕಿಂಗ್ ಭೂಮರಡ್ಡಿಬಸವಪ್ಪನವರು
ನಮ್ಮ ಯುವ ಸಮುದಾಯಕ್ಕೆ ಮಾದರಿ ನಿಜವಾಗಲು ಇವರ ಜೀವನ ಚರಿತ್ರೆಯನ್ನು ಯಾಕೆ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಒದಲಿಕ್ಕೆ
ಇಡಬಾರದು ?

ಇವರುಒದಿದ್ದು ಕೇವಲ 6 ನೇ ತರಗತಿಯಾದ್ರು ಸಾದಿಸಿದ್ದು ಅಗಾಧವಿದೆ.

ಸಾಹಸಿ,ಉದ್ಯಮಿ:
ಭೂಮರಡ್ಡಿ_ಬಸವಪ್ಪನವರು
ಕಾಯಕವೇ ಕೈಲಾಸ ಎಂದು ನಂಬಿ ಅದೇರೀತಿ ನಡೆದುಕೊಂಡು ದೇಶದ ಜನರಿಂದ OIL KING ಎಂದು ಕರೆಸಿಕೊಂಡವರು.

ಬಸವಪ್ಪ ಭೂಮರೆಡ್ಡಿಯವರು. ಶೂನ್ಯದಿಂದ ಸಾಹುಕಾರಿಕೆಯ ಉತ್ತಂಗಕ್ಕೆ ಎರಿದವರು..

ಕೂಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೂಪ್ಪ ಗ್ರಾಮದಲ್ಲಿ 1885 ರಲ್ಲಿ ಜನಿಸಿದ ಇವರು ಬನ್ನಿ ಕೊಪ್ಪದಲ್ಲಿ ಬಸಲಾಪುರದ ವೀರನಗೌಡ್ರು ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.

ಗಣಿತ ಬಸವಪ್ಪನವರ ಮೆಚ್ಚಿನ ವಿಷಯವಾಗಿತ್ತು. ಮನೆಯಲ್ಲಿನ ಬಡತನದದಿಂದ ಕೇವಲ ಆರನೇಯ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಲು ಸಾಧ್ಯವಾಯಿತು.

ನಂತರ ಕೂಪ್ಪಳದಲ್ಲಿ ಅಡುಗೆ ಎಣ್ಣೆ ಮಾರುವ ಅಂಗಡಿಗಳಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು.ನಂತರ ಬನ್ನಿಕೂಪ್ಪದಲ್ಲಿ ಸ್ವಂತ ಚಿಕ್ಕ ಕಿರಾಣಿ ಅಂಗಡಿ ತೆರೆದರು.ಹತ್ತಿ ಬೆಳೆಯ ಸುಗ್ಗಿಯಲ್ಲಿ ಮನೆ ಮನೆ ತೆರಳಿ ಹತ್ತಿ ಖರಿದಿಸಿದರು..

ನಂತರ ಊರೂರು ಅಲೆದು ಬಳ್ಳೊಳ್ಳಿ ,ಜೀರಿಗೆ ಮಾರಾಟ ಮಾಡಿದರು..ಅಲ್ಲಿಂದ ಗದಗಿನ ದಲಾಲಿ ಅಂಗಡಿಯಲ್ಲಿ ಖಜಾಂಚಿ ಎಂದುಕೆಲಸ ಪ್ರಾರಂಬಿಸಿದರು.ಕೆಲಸ ದಲ್ಲಿ ನಿಷ್ಠೆ ತೋರಿದ್ದಕ್ಕೆ ವ್ಯಾಪಾರದಲ್ಲಿ ಎರಡು ಆಣೆ ಪಾಲುಕೂಟ್ಟರು.

ಹುಮ್ಮಸಿನಿಂದ ದುಡಿದು ವ್ಯಾಪಾರದ ಆಳ-ಅಗಲ ಅರಿತರು.. ಹೀಗೆ ಕೆಲಸ ಮಾಡುತ್ತಾ ಮತ್ತೂಂದಿಷ್ಟು ಜನರೂಂದಿಗೆ ವ್ಯಾಪಾರದಲ್ಲಿ ಪಾಲುದಾರರಾದರು..

ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಬಸ್ ಸಂಚಾರ ಸೇವೆ ಒದಗಿಸಿದ್ದೇ ಭೂಮರಡ್ಡಿ ಬಸವಪ್ಪನವರು.

ಇದಕ್ಕೆ ತಮಗೊಬ್ಬರಿಗೆ ಬಂಡವಾಳ ಹಾಕಲು ಸಾದ್ಯವಾಗದೆ ಇದ್ದಾಗ ಮೂವರು ಜನರನ್ನು ಸಾರಿಗೆ ವ್ಯವಹಾರದಲ್ಲಿ ಪಾಲುದಾರನ್ನಾಗಿಸಿಕೂಂಡು ಬಾಗಲಕೋಟೆ ಮತ್ತು ಇಳಕಲ್ ನಡುವೆ ಬಸ್ ಸಂಚರಿಸಲು 1917 ರಲ್ಲಿ ಪರವಾನಿಗೆ ಪಡೆದರು.

ಆದರೆ ಬಸ್ ನ ವೀಪರಿತ ಸಪ್ಪಳಕ್ಕೆ ಜನ ಹೆದರಿ ಓಡಲು ಪ್ರಾರಂಭಿಸಿದರು. ಕಾರಣ ಆಗ ಬಸ್ ಗಾಲಿ ಗಾಳಿಯಿಂದ ತುಂಬಿರದೇ solid ಇದ್ದವು.ಜನರಿಂದ ಸ್ಪಂದನೆ ದೂರೆಯದ ಕಾರಣ ಉದ್ಯಮದಲ್ಲಿ ನಷ್ಟ ಕಂಡರು..ಸರಕಾರ ಬಸ್ಸಿನ ಲಾಯಸ್ಸನ್ಸ ರದ್ದು ಮಾಡಿದರಿಂದ 1919ರಲ್ಲಿ ಸಂಚಾರ ನಿಲ್ಲಿಸಿದರು..ಆಗ ಅವರಲ್ಲಿ ಎರಡು ಬಸ್ ಗಳಿದ್ದವು.

ನಂತರ ಬಸವಪ್ಪ ನವರು ಹೈದರಾಬಾದ್ ನಿಜಾಮನ ರಾಜ್ಯದಲ್ಲಿ ಹಣ ಭರಣ ಮಾಡಿ 5 ವರ್ಷ ಬಸ್ ಸಂಚಾರಕ್ಕೆ monopoly ಒಪ್ಪಂದ ಮಾಡಿಕೂಂಡರು.

1920 ರಲ್ಲಿ ಬಿ.ವಿ.ಭೂಮರೆಡ್ಡಿ ಗ್ಯಾರೆಂಟೆಡ ಮೋಟಾರು ಸರ್ವಿಸ್ ಹೆಸರಿನಲ್ಲಿ ಸ್ವಂತ ಕಂಪನಿ ಆರಂಬಿಸಿದರು.. ಸಿಬ್ಬಂದಿ ಗಳನ್ನು ಮನೆಯ ಮಕ್ಕಳಂತೆ ನೋಡಿಕೂಂಡರು.. ಆಗಲೇ ಅವರಿಗೆ ದಿನಕ್ಕೆ 50/60ರೂಪಾಯಿ ಸಂಬಳವನ್ನು ನೀಡುತ್ತಿದ್ದರು.

ಸಾರಿಗೆ ಉದ್ಯಮ ಚನ್ನಾಗಿ ನಡೆಯುವಾಗ ಸಹಿಸದ ಕೇಲವರು ನಿಜಾಮನಿಗೆ ತಕಾರಾರು ಕೂಟ್ಟರು.ನಿಜಾಮ ಸಾರಿಗೆ ಅನುಮತಿ ರದ್ದುಪಡಿಸಿದ..ಬಸವಪ್ಪ ನವರು ಮತ್ತೆ ನಜರಾಣಾ ಕೂಟ್ಟು 15 ವರ್ಷದ monopoly ಗೆ ಬರೆಯಿಸಿಕೂಂಡರು.ಬಸ್ ಗಳ ಸಂಖ್ಯೆ 2 ರಿಂದ 40 ಕ್ಕೆ ಏರಿತು.

1936 ರಲ್ಲಿ ನಿಜಾಮ್ ಮತ್ತು ಬಸವಪ್ಪನವರ ಒಪ್ಪಂದ ಮುಗಿಯಿತು..
ನಿಜಾಮನೂಂದಿಗೆ ಒಪ್ಪಂದ ಮುಗಿದಾಗ ಬಂದ ಹಣವನ್ನು ಅಡುಗೆ ಎಣ್ಣೆ ತಯಾರಿಕೆಯಲ್ಲಿ ತೂಡಗಿಸಿದರು.

1928 ರಲ್ಲಿ ಕಲ್ಬುರ್ಗಿಯಲ್ಲಿ ,1930 ರಲ್ಲಿ
ಬಳ್ಳಾರಿ ಯಲ್ಲಿ ,1931 ರಲ್ಲಿ ಯಾದಗಿರಿಯಲ್ಲಿ 1935 ರಲ್ಲಿ ಐಲ್ ಮಿಲ್ ಸ್ಥಾಪಿಸಿದರು.
ಜಯರಾಬಾದ ಮತ್ತು ನಾಂದೇಡದಲ್ಲಿಯೂ ಸ್ಥಾಪಿಸಿದರು..

ಎಲ್ಲ oil mill ಗಳಿಂದ ಉತ್ಪಾದನೆಯಾಗುವ ಎಣ್ಣೆಯನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು..

ನಿತ್ಯ ರೈಲ್ವೆ ಟ್ಯಾಂಕ್ ನಲ್ಲಿ ಎಣ್ಣೆಯನ್ನು ಸಾಗಿಸುತ್ತದ್ದರು.1936ರಲ್ಲಿ ಪುಣಾ ದಲ್ಲಿ ಕಿರುಕಳ ಎಣ್ಣೆ ಅಂಗಡಿ ತೆಗೆದರು..

1938 ಗಜೇಂದ್ರಗಡದಲ್ಲಿ , 1940 ರಲ್ಲಿ ಸೌರಾಷ್ಟ್ರ ಅಮಮರೇಲಿ ಯಲ್ಲಿ Oil Mill ಪ್ರಾರಂಬಿಸಿದರು.1939ರಲ್ಲಿ ಮುಂಬೈಯಲ್ಲಿ ಬಿ.ವಿ.ಭೂಮರಡ್ಡಿ & ಕಂಪನಿ ಹೆಸರಿನ ದಲಾಲಿ ಅಂಗಡಿ ತೆರೆದರು.

ಮುಂಬೈನ ವಜೀರ oil mill ಖರೀಧಿಸಿ, karnataka oil mill ಅಂತ ಹೆಸರು ಬದಲಾಯಿಸಿದರು..

1943ರಲ್ಲಿ ಮುಂಬೈನ ಪಾಕಲಾಂಡ ನಲ್ಕಿ , 1945 ರಲ್ಲಿ ಕೃಷ್ಣ oil mill ಪ್ರಾರಂಬಿಸಿದರು. ಹೀಗೆ ಕರ್ನಾಟಕ, ಆಂದ್ರ ಪ್ರದೇಶ್ , ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಗಳಲ್ಲಿ ಎಣ್ಣೆ ಕಾರ್ಖಾನೆ ಪ್ರಾರಂಬಿಸಿ ದೇಶವ್ಯಾಪಿ ಕೀರ್ತಿ ಗಳಿಸಿ,oil king ಎಂದೇ ಪರಿಚಿತರಾದರು..

ಹತ್ತಾರು ಕಾರಖಾನೆಗೆ ಬೇಕಾಗುವ ಯಂತ್ರ ಖರೀದಿಸುವ ಬದಲು ಗದುಗಿನ ಇಮಾಮಸಾಬ ಡಂಬಳ ಅವರ ಜೂತೆ ಚರ್ಚಿಸಿ ಮುಂಬೈನ ಡಂಕನ ರೋಡಿನಲ್ಲಿ ಪ್ರೀಮಿಯರ್ ಇಂಜಿನೀಯರಿಂಗ್ ಕಂಪನಿ ಎಂದು ಹೆಸರು ಇಟ್ಟರು.

ಭೂಮರಡ್ಡಿ ಬಸವಪ್ಪನವರು ಜರ್ಮನಿಯ ತಂತ್ರಜ್ಞಾನ ಅರಿಯಲು ಜರ್ಮನ್ ಪ್ರವಾಸವನ್ನು 1936 ಕೈಗೂಂಡರು,ಕನ್ನಡ, ಹಿಂದಿ. ಮರಾಠಿ, ಗುಜರಾತಿ ಬಾಷೆ ಬಲ್ಲ ಬಸವಪ್ಪನವರಿಗೆ ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷ್ ಬರುತಿತ್ತು..

ಬಸವಪ್ಪ ನವರು ಮುಂಬೈನಲ್ಲಿ ಬಾಬುರಾವ್ ಎಂಬುವರ ಖಾನಾವಳಿಯಲ್ಲಿ ಊಟಮಾಡುವಾಗ,ಕೆಮ್ಮು ಬಂದಿತ್ತು,ಆಗ ಬಾಬುರಾವ್ ಇನ್ನೂಮ್ನೆ ನಮ್ಮ ಕ್ಯಾಂಟಿನ್ ಗೆ ಊಟಕ್ಕೆ ಬರಬೇಡಿ ಎಂದಿದ್ದಕ್ಕೆ ಹಠಕ್ಕೆ ಬಿದ್ದು ಬಸವಪ್ಪ ನವರು ಗೌರಿಶಂಕರ ಎಂಬ ಖಾನಾವಳಿಯನ್ನು 1930 ರಲ್ಲಿ ಪ್ರಾರಂಭಿಸಿ, ಕನ್ನಡಿಗರಿಗೆ ಮುಂಬೈ ನಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು..

1930 ರಲ್ಲಿ ಬಸವಪ್ಪನವರು ಕರ್ನಾಟಕ ಕೆಮಿಕಲ್ ವರ್ಕ್ಸ್ ಎನ್ನುವ ಔಷಧ ಕಂಪನಿ ಆರಂಭಿಸಿದರು.. ನಂತರ ಅದನ್ನು ಡಾ!!ತುಮ್ಮನಕಟ್ಟಿ ಅವರಿಗೆ ಬಿಟ್ಟು ಕೂಟ್ಟರು.

1942-43 ರಲ್ಲಿ ಮುಂಬೈ ಯಲ್ಲಿ ನ್ಯೂ ಕರ್ನಾಟಕ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಪ್ರಸ್ ಹೆಸರಿನ ಮದ್ರಣಾಲಯ ಪ್ರಾರಂಬಿಸಿದರು..

1952ರಲ್ಲಿ ಗದಗಿನಲ್ಲಿ ಕಾಟನ್ ಪ್ರೇಸಿಂಗ್ ಮತ್ತು ಜಿನ್ನಿಂಗ್ ಮಿಲ್ ಪ್ರಾರಂಭಿಸಿದರು.

1956ರಲ್ಲಿ ಗದಗಿನಲ್ಲಿ ರವಾ ಮಿಲ್ ಪ್ರಾರಂಬಿಸಿದರು. 1959ರಲ್ಲಿ ಪೂಣೆ ಮತ್ತು ಮುಂಬಯಿ ಮದ್ಯೆ ಠಾಣಾದಲ್ಲಿ ಬಿ.ವಿ.ಭೂಮರಡ್ಡಿ ಕ್ವಾರಿ ಆರಂಬಿಸಿದರು.

ಇಷ್ಟೆಲ್ಲಾ ದೈತ್ಯ ಉದ್ಯಮ ಕಟ್ಟಿದ ಇವರಿಗೆ ಪ್ರಾಮಾಣಿಕ ನೌಕರರ ಸಮಸ್ಯೆ ಕಾಡಿತು..

ಸರಕಾರ ಆದಾಯ ತೆರಿಗೆ ನೆಪದಲ್ಲಿ 20 ಲಕ್ಷ ಮುಂಗಡವಾಗಿ ಹಣ ಕಟ್ಟಲು ಹೇಳಿದರು..

ಹಾಗಾಗಿ ಈ ವ್ಯವಹಾರದ ಜಂಜಾಟವೇ ಸಾಕು ಎಂದು ಅಲ್ಲಲ್ಲಿ ದುಡಿಯುತ್ತಿರುವ ತಮ್ಮ ಸಂಬಂಧಿಕರಿಗೆ ಆಸ್ತಿ ಬರೆದು ಕೂಟ್ಟು, ಇನ್ನುಳಿದ್ದದನ್ನು ಮಾರಾಟ ಮಾಡಿ,ದಾನ ಮಾಡಿದರು‌.

ಅವರು ಮಾಡಿದ ದಾನ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಹೆಸರನ್ನು ಶಾಶ್ವತವಾಗಿರಿಸಿತು. ಇವರು ಆಗಿನ ಕಾಲದಲ್ಲಿ 20 ಲಕ್ಷಕ್ಕೂ ಅದಿಕ ನಗದು ದಾನ ಮಾಡಿದರು.

ಇದರ ಪ್ರತಿರೂಪವಾಗಿ ಕೆ.ಎಲ್.ಇ ಸಂಸ್ಥೆಯ ಹುಬ್ಬಳ್ಳಿಯ B.V.B engineering ಮಹಾವಿದ್ಯಾಲಯ.ಇದು ಆರಂಭದಲ್ಲಿ ಗದಗದಿಂದ ಪ್ರಾರಂಬವಾಗಿ ನಂತರ ಹುಬ್ಬಳ್ಳಿಗೆ ಸ್ಥಳಾಂತರವಾಯಿತು.

ಇದರ ಸ್ಥಾಪನೆಗೆ 1 ಲಕ್ಷ ರೂಪಾಯಿ ಮತ್ತು ಅದಕ್ಕೆ ಬೇಕಾಗುವ ಉಪಕರಣಗಳನ್ನು ಒದಗಿಸಿಕೂಟ್ಟರು..ಇದು ದೇಶದ ಅತ್ಯುನ್ನತ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಒಂದಾಗಿದೆ..ಅದಕ್ಕೆ ಅವರದೇ ಹೆಸರುಟ್ಟು KLE ಯವರು ಗೌರವಿಸಿದ್ದಾರೆ..

ಮುಂಬಯಿ ಕರ್ನಾಟಕ ಸಂಘ ಕಟ್ಟಲು ಆರ್.ಡಿ.ಕಾಮತರಿಗೆ 1940 ರಲ್ಲಿ 25 ಸಾವಿರ ನಗದು ನೀಡಿದರು..ಹೀಗೆ ಅವರು ನೀಡಿದ ದೇಣಿಗೆಯ ಪಟ್ಟಿ ಆಕಾಶದೆತ್ತರಕ್ಕೆ ಬೆಳೆಯುವುದು..

ಇವರಿಗೆ ಮಕ್ಕಳು ಆಗದೇ ಇದ್ದಾಗ ಇನ್ನೂಂದು ಮದುವೆಯಾಗಲು ಹೇಳಿದ ಹಿರಿಯರಿಗೆ ಶಾಲೆಯ ಮುಂದೆ ಆಡುವ ಮಕ್ಕಳನ್ನೆಲ್ಕಾ ತೋರಿಸಿ ಅವೆಲ್ಲ ನನ್ನ ಮಕ್ಕಳೆ ಎಂದು ಅಭಿಮಾನದಿಂದ ನುಡಿದ ತತ್ವಜ್ಞಾನಿ ಭೂಮರಡ್ಡಿ ಬಸವಪ್ಪನವರು..
(ವ್ಯಾಟ್ಸ್ ಪ್ ವಾಲ್ ನಲ್ಲಿ ಬಂದದ್ದು)

About The Author

Leave a Reply